35 ಲಕ್ಷ ರೈತರಿಗೆ 65 ಕೋಟಿ ಬರ ಪರಿಹಾರ ಹಣ ಬಿಡುಗಡೆ

Written by Ramlinganna

Updated on:

65crore Drought money released ರಾಜ್ಯದಾದ್ಯಂತ ಒಟ್ಟಾರೆ 35 ಲಕ್ಷ ರೈತರಿಗೆ 65 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಇದುವರೆಗೂ 24 ಲಕ್ಷ ಜನವರಿ 519 ಕೋಟಿ ರೂಪಾಯಿ ಪಾವತಿಯಾಗಿದೆ. 2-3 ದಿನದಲ್ಲಿ ರಾಜ್ಯದ ಉಳಿದ 11-12 ಲಕ್ಷ ಜನರಿಗೆ ಹಣ ಜಮೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ರಾಜ್ಯದಲ್ಲಿ ಮಳೆ ಅಭಾವ ಕಾರಣ ಬರಗಾಲ ಘೋಷಣೆ ಮಾಡಿದ್ದರಿಂದ ಬರಗಾಲ ಪರಿಹಾರ ಆರಂಭಿಕ ಕಂತು ತಲಾ 2 ಸಾವಿರ ರೂಪಾಯಿ ಈಗಾಗಲೇ ಕಲಬುರಗಿ ಜಿಲ್ಲೆಯ 2.25 ಲಕ್ಷ ರೈತರಿಗೆ 44.74 ಕೋಟಿರೂಪಾಯಿ ಜಮೆ ಮಾಡಿದ್ದು, ಬಾಕಿ ಉಳಿದ 1.60 ಲಕ್ಷ ರೈತರಿಗೆ 2-3 ದಿನದಲ್ಲಿ ಹಣ ಜಮೆಯಾಗಲಿದೆ ಎಂದರು.

ಬುಧವಾರ ಇಳ್ಲಿನ ಜಿಲ್ಲಾಧಿಗಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು,  ಬರಗಾಲ ಘೋಷಣೆ ಮಾಡಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಹಣ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದುವರೆಗೂ ಯಾವುದೇಹಣ ಬಿಡುಗಡೆಯಾಗಿಲ್ಲ. ಸಂಕಷ್ಟದಲ್ಲಿದ ರೈತರಿಗೆ ನೆರವಿಗೆ ಧಾವಿಸಲು ಎನ್.ಡಿ.ಆರ್.ಎಫ್ ಅನುದಾನ ನಿರೀಕ್ಷಿಸಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಇದನ್ನೂ ಓದಿ ನಿಮ್ಮ Survey Numberನಲ್ಲಿ ಯಾವ ರೈತರ ಹೆಸರಿದೆ? Mobileನಲ್ಲೇ ಚೆಕ್ ಮಾಡಿ

ಡಿಬಿಟಿ ಹಣ ಪಾವತಿ ಸಂದರ್ಭದಲ್ಲಿ ಎದುರಿಸಲಾಗುತ್ತಿದ್ದು, ಆಧಾರ್, ಬ್ಯಾಂಕ್ ಲಿಂಕ್ ಅಪ್ಡೇಟ್ ಕಾರ್ಯ ಶೇ. 60 ರಿಂದ 80ಕ್ಕೆ ಹೆಚ್ಚಿಸಿದ್ದರಿಂದ ಶೇ. 80 ರಷ್ಟು ಜನಿರೆಗ ಪರಿಹಾರ ಸಿಕ್ಕಿದೆ. ನಮ್ಮ ಗುರಿಯಂತೆ ಇನ್ನೂ ಕನಿಷ್ಟ ಶೇ. 5 ರಷ್ಟು ಅಪ್ಡೇಟ್ ಕಾರ್ಯ ಮಾಡಬೇಕಿದೆ. ಮುಂದಿನಕಂತು ಪಾವತಿಯೊಳಗೆ ಈ ಸಮಸ್ಯೆ ಬಗೆಹರಿಸಬೇಕು. ಇದನ್ನು ಮಿಷನ್ ಮೋಡಿ ನಲ್ಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಸಚಿವರು ನಿರ್ದೇಶನ ನೀಡಿದರು.

ಪಹಣಿಗೆ ಆಧಾರ್ ಲಿಂಕ್  ಎಲ್ಲವೂ ದಾಖಲೀಕರಣ

ಕೇಂದ್ರ ಸರ್ಕಾರವು ಆರ್.ಟಿ.ಸಿಗೆ ಆಧಾರ್ ಲಿಂಕ್ ಮಾಡಲು ನಿರ್ದೇಶನ ನೀಡಿದ್ದು, ಮುಂದಿನ ದಿನದಲ್ಲಿ ಇದರ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಜೊತೆಗೆ ಕಂದಾಯ, ಸರ್ವೆ, ಸಬ್ ರಿಜಸ್ಟರ್ ಕಚೇರಿಯ ಎಲ್ಲಾ ದಾಖಲೆಗಳು ಮುಂದಿನ ಒಂದುವರೆ ವರ್ಷದಲ್ಲಿ ದಾಖಲೀಕರಣ ಮಾಡಲಾಗುತ್ತಿದೆ. ಇದರಿಂದ ವಂಚನೆ ತಡೆಯುವುದಲ್ಲದೆ ದಾಖಲೆ ಹುಡುಕುವ ತಾಪತ್ರಯ ತಪ್ಪಲಿದೆ. ಇದಕ್ಕೆಲ್ಲಾ ಸಿದ್ದತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದ ಅವರು, ಸರ್ವೆಯರ್ ನೇಮಕಾತಿಗೂ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

65crore Drought money released ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ? ಇಲ್ಲೇ ಚೆಕ್ ಮಾಡಿ

ನಿಮಗೆ ಬರಗಲಾ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಇಯರ್ ನಲ್ಲಿ 2023-24  ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ  ಆಧಾರ್ ಸಂಖ್ಯೆ ನಮೂದಿಸಬೇಕು.  ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು.ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.

ಮೈಸೂರು ಜಿಲ್ಲೆಯ ರೈತರು ಯಾರಿಗೆ ಸಂಪರ್ಕಿಸಬೇಕು?

ಮೈಸೂರು ತಾಲೂಕು ಕಚೇರಿಯ ದೂರವಾಣಿ ಸಂಖ್ಯೆ 0821 2414812, ನಂಜನಗೂಡು 08221 223108, ಟಿ. ನರಸಿಪುರ 91485 55170, ಎಚ್.ಡಿ. ಕೋಟೆ 08228 255325, ಹುಣಸೂರು 08222 252929, ಪಿರಿಯಾಪಟ್ಟಣ 08223 274175, ಸರಗೂರು 08228 296100, ಕೆ.ಆರ್. ನಗರ 08223 262371 ಹಾಗೂ ಸಾಲಿಗ್ರಾಮ 08223 262371 ಸಂಪರ್ಕಿಸಬಹುದು.

ಕಲಬುರಗಿ ಜಿಲ್ಲೆಯ ರೈತರು ಯಾರಿಗೆ ಸಂಪರ್ಕಿಸಬೇಕು?

ಬರಗಾಲ ಪರಿಹಾರ ಕುರಿತಂತೆ ಸಹಾಯವಾಣಿ ಸಂಖ್ಯೆ 1077, ತಾಲೂಕು ಮಟ್ಟದ ಸಹಾಯವಾಣಿಗಳಾದ ಅಫಜಲ್ಪುರ ತಾಲೂಕಿನ ರೈತರು 7760208044, ಆಳಂದ ತಾಲೂಕಿನ ರೈತರು 08477 202428, ಚಿತ್ತಾಪುರ ತಾಲೂಕಿನ ರೈತರು 08474 236250, ಚಿಂಚೋಳಿ ತಾಲೂಕಿನ ರೈತರು 9902977599,  ಜೇವರ್ಗಿ ತಾಲೂಕಿನ ರೈತರು 7411843393, ಕಮಲಾಪುರ ತಾಲೂಕಿನ ರೈತರು 08478 200144, ಕಲಬುರಗಿ ತಾಲೂಕಿನ ರೈತರು 08472 278636, ಶಹಾಬಾದ್ 08474 295910, ಸೇಡಂ ತಾಲೂಕಿನ ರೈತರು 9535448788, ಹಾಗೂ ಯಡ್ರಾಮಿ ತಾಲೂಕಿನ ರೈತರು 9743682346 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment