ಅಮೃತ ಸ್ವಾಭಿಮಾನಿ 20 + 1 ಕುರಿ ನೀಡಲುಅರ್ಜಿ ಆಹ್ವಾನ

Written by Ramlinganna

Published on:

20 goat subsidy : 20 ಕುರಿಗಳನ್ನು ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಆಸಕ್ತರೈತರು ಕೂಡಲೇ ತಮ್ಮ ಹತ್ತಿರದ ಪಶು ಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಅರ್ಜಿ ಸಲ್ಲಿಸಬಹುದು.

ಕಲಬುರಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2023-24ನೇ ಸಾಲಿನ ಅಮೃತ ಸ್ವಾಭಿಮಾನಿ 20 + 1 ಕುರಿಗಾಹಿ ಯೋಜನೆಯಡಿ ಈಗಾಗಲೇ ಅನುಷ್ಠಾನಗೊಳಿಸಿದ ಗುರಿಗಳನ್ನು ಹೊರತುಪಡಿಸಿ ಉಳಿದ ಗುರಿಗಳನ್ನು ನಿಗಮದಲ್ಲಿ ನೋಂದಾಯಿತ ಮತ್ತು 2023 -24 ನೇ ಸಾಲಿಗೆ ಅರ್ಹರಿರುವ ಹೋಬಳಿ ಮಟ್ಟದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಮರು ಹಂಚಿಕೆ ಮಾಡಿ ಸಂಘದ ಸದಸ್ಯರುಗಳಿಗೆ ಜಿಲ್ಲಾ ಆಯ್ಕೆ ಸಮಿತಿಯ ಮುಖಾಂತರ ಆಯ್ಕೆ ಮಾಡಿ ಯೋಜನೆಯನ್ನು ಸಂಪೂರ್ಣ ಅನುಷ್ಠಾನಗೊಳಿಸಲು ಸಂಘದ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಎಂದುಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಉಪನಿರ್ದೇಶಕರು ತಿಳಿಸಿದ್ದಾರೆ.

20 goat subsidy                           

ಅರ್ಹ ಸಂಘದ ಸದಸ್ಯರು ಕಲಬುರಗಿ ಕರ್ನಾಟಕ ಕುರಿ ಅಭಿವೃದ್ಧಿ ನಿಗಮ ನಿಯಮಿತದ ಉಪ ನಿರ್ದೇಶಕರ ಕಚೇರಿಯಿಂದ ಕಚೇರಿ ವೇಳೆಯಲ್ಲಿ ನಿಗದಿತ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಆಗಸ್ಟ್ 5 ರೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕರ್ನಾಟಕ ಕುರಿ ಅಭಿವೃದ್ಧಿ ನಿಗಮ ನಿಯಮಿತದ ಉಪ ನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 237772 ಗೆ ಸಂಪರ್ಕಿಸಲು ಕೋರಲಾಗಿದೆ.

ವಿವಿಧ ತಾಲೂಕುಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ಆಹ್ವಾನ

ವಿವಿಧ ತಾಲೂಕುಗಳಿಂದ 61 ಅಂಗನವಾಡಿ ಕಾರ್ಯಕರ್ತೆ ಹಾಗೂ 238 ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿ ಅರ್ಜಿ ಆಹ್ವಾನಿಸಲಾಗಿದೆ. ಕಲಬುರಗಿ ಜಿಲ್ಲೆಯ ಒಂಬತ್ತು ಶಿಶು ಅಭಿವೃದ್ಧಿಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆ ಹಾಗೂ 238 ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಫಜಲ್ಪೂರ ತಾಲೂಕಿನಲ್ಲಿ 17 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 25 ಸಹಾಯಕಿಯರ ಹುದ್ದೆಗಳು, ಆಳಂದ ತಾಲೂಕಿನಲ್ಲಿ 5 ಅಂಗನವಾಡಿ ಕಾರ್ಯಕರ್ತೆಯರ ಮತ್ತು 26 ಸಹಾಯಕಿಯರ ಹುದ್ದೆಗಳು, ಚಿಂಚೋಳಿ ತಾಲೂಕಿನಲ್ಲಿ 7 ಅಂಗನವಾಡಿ ಕಾರ್ಯಕರ್ತೆಯರ ಹಾಗೂ15 ಸಹಾಯಕಿಯರ ಹುದ್ದೆಗಳು, ಚಿತ್ತಾಪುರ ತಾಲೂಕಿನಲ್ಲಿ 10 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ :  Ekyc list ಯಾವ ರೈತರ ಇಕೆವೈಸಿ ಆಗಿಲ್ಲವೋ ಆ ರೈತರ ಪಟ್ಟಿ ಬಿಡುಗಡೆ                                                 

ಕಲಬುರಗಿ (ಗ್ರಾಮೀಣ) ಯೋಜನೆ ವ್ಯಾಪ್ತಿಯಲ್ಲಿ 10 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 20 ಸಹಾಯಕಿಯರ ಹುದ್ದೆಗಳು, ಕಲಬುರಗಿ (ನಗರ) ಯೋಜನೆ ವ್ಯಾಪ್ತಿಯಲ್ಲಿ 92 ಅಂಗನವಾಡಿ ಸಹಾಯಕಿಯರ ಹುದ್ದೆಗಳು, ಜೇವರ್ಗಿ ತಾಲೂಕಿನಲ್ಲಿ 10 ಅಂಗನವಾಡಿ ಕಾರ್ಯಕರ್ತೆಯರ  ಮತ್ತು 20 ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ  ಆಹ್ವಾನಿಸಲಾಗಿದೆ.

ಸೇಡಂ ತಾಲೂಕಿನಲ್ಲಿ 6 ಅಂಗನವಾಡಿ ಕಾರ್ಯಕರ್ತೆಯರ ಮತ್ತು 19 ಸಹಾಯಕಿಯರ ಹುದ್ದೆಗಳು ಹಾಗೂ ಶಹಾಬಾದ್ ತಾಲೂಕಿನಲ್ಲಿ 6 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 11 ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಬಹುದು.

ಆಗಸ್ಟ್ 7 ರ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಆಯಾ ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Anganawadi Teacher ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ

https://karnemakaone.kar.nic.in/abcd/ApplicationForm_JA_org.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.  ನಂತರ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು.  ಕೆಟಗೇರಿ ಆಯ್ಕೆ ಮಾಡಿಕೊಳ್ಳಬೇಕು. ಜಾತಿ ಪ್ರಮಾಣ ಪತ್ರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

Leave a Comment