subsidy for multi crop thresher ಇತ್ತೀಚಿನ ದಿನಗಳಲ್ಲಿ ಗ್ರಾಮೀಣಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆಯುಂಟಾಗುತ್ತಿದೆ. ಸಕಾಲದಲ್ಲಿ ಕೊಯ್ಲು, ಒಕ್ಕಣೆ ಮಾಡಲು ಕಷ್ಟವಾಗುತ್ತಿದ್ದರಿಂದ ರೈತರಿಗೆ ಅನುಕೂಲವಾಗಲು ಕೃಷಿ ಯಂತ್ರೋಪಕರಣಗಳು ಮಾರುಕಟ್ಟೆಗೆ ಬಂದಿವೆ. ರೈತರ ಬೇಡಿಕೆಗನುಸಾರವಾಗಿ ಹೊಸ ಹೊಸ ಯಂತ್ರೋಪಕರಣಗಳು ರೈತರಿಗೆ ಅಗತ್ಯಗನುಸಾರವಾಗಿ ಮಾರುಕಟ್ಟೆಗೆ ಬರುತ್ತಿವೆ. ಈ ಕೃಷಿಯಂತ್ರೋಪಕರಣ ಖರೀದಿ ಮಾಡಲು ರೈತರಿಗೆ ಆರ್ಥಿಕ ಹೊರೆಯಾಗಬಾರದೆಂದು ಸರ್ಕಾರವು ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡುತ್ತಿದೆ.
ಹೌದು, ಟ್ರ್ಯಾಕ್ಟರ್, ಹಾರ್ವೆಸ್ಟರ್, ಕಲ್ಟಿವೇಟರ್ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡುವಂತೆ ಈಗ ಬಹುಬೆಳೆ ಒಕ್ಕಣೆಮಾಡುವ ಯಂತ್ರಕ್ಕೂ ಸಬ್ಸಿಡಿ ನೀಡಲಾಗುತ್ತಿದೆ. ರೈತರಿಗೆ 1 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ಈ ಯಂತ್ರವನ್ನು ರೈತರು ನೇರವಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಪಡೆಯಬಹುದು. ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಂದ ರೈತರಿಗೆ ಸಬ್ಸಿಡಿಯಲ್ಲಿ ನೀಡಲು ಸೂಚಿಸಲಾಗಿದೆ. ಕೆಲವು ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇರೈತರಿಗೆ ಸಬ್ಸಿಡಿಯಲ್ಲಿ ಒಕ್ಕಣೆ ಮಾಡುವ ಯಂತ್ರವನ್ನುವಿತರಿಸಲಾಗಿದೆ.
ಟ್ರ್ಯಾಕ್ಟರ್ ಗಳಿಗೆ ಅಳವಡಿಸುವ ಈ ಯಂತ್ರ ಅತ್ಯಂತ ವೇಗವಾಗಿ ಕಾಳು ಒಕ್ಕುವ ಸಾಮರ್ಥ್ಯ ಹೊಂದಿದೆ. ಕಲ್ಲು, ಮಣ್ಣು ಮತ್ತಿರ ಬೇಡವಾದ ವಸ್ತುಗಳನ್ನು ಬೇರ್ಪಡಿಸಿ ಸ್ವಚ್ಛವಾದ ಧಾನ್ಯ ಒಂದೆಡೆ ಹಾಕುವ ಈ ಯಂತ್ರ ರೈತರಿಗೆ ವರದಾನವಾಗಿದೆ.
subsidy for multi crop thresher ಯಾವ ಯಾವ ಬೆಳೆಗಳ ಒಕ್ಕಣೆ ಮಾಡಬಹುದು?
ಶೇಂಗಾ (ನೆಲಗಡಲೆ), ಕಡಲೆ, ಭತ್ತ, ಮೆಕ್ಕೆಜೋಳ, , ರಾಗಿ, ಸೋಯಾ, ಹುರಳಿ, ಜೋಳ, ಸೂರ್ಯಕಾಂತಿ, ಗೋಧಿ, ಉದ್ದಿನ ಬೇಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ರೈತರು ಒಕ್ಕಣೆ ಮಾಡಬಹುದು. ಈ ಯಂತ್ರದ ಸಹಾಯದಿಂದ ರೈತರು ಒಂದು ಗಂಟೆಗೆ ಒಂದು ಎಕರೆಯವರೆಗೆ ಒಕ್ಕಣೆ ಮಾಡಬಹುದು. ಮೆಕ್ಕೆಜೋಳದ ಸಿಪ್ಪೆಯನ್ನು ತೆಗೆಯದೆ ಒಕ್ಕಣೆ ಮಾಡುತ್ತದೆ. ಒಂದು ಗಂಟೆಗೆ ಸುಮಾರು 70 ರಿಂದ 80 ಚೀಲಗಳನ್ನು ಒಕ್ಕಣೆ ಮಾಡುತ್ತದೆ.
ಇದನ್ನೂ ಓದಿ : ಯಾವ ಬೆಳೆಗೆ ಎಷ್ಟು ವಿಮೆ ಹಣ ಬರುತ್ತದೆ ? ಮೊಬೈಲ್ ನಲ್ಲೇ ಚೆಕ್ ಮಾಡಬೇಕೆ? ಇಲ್ಲಿದೆ ಮಾಹಿತಿ
ಒಕ್ಕಣೆ ಮಾಡಿದ ಧಾನ್ಯಗಳ ತುದಿಗೆ ಯಾವ ಹಾನಿ ಮಾಡಲ್ಲ. ರೈತರ ಬೆಳೆಯೂ ಹಾಳಾಗುವುದಿಲ್ಲ. ಈ ಯಂತ್ರಗಳನ್ನು ವಿವಿಧ ಪ್ರಕಾರದ ಟ್ರ್ಯಾಕ್ಟರ್ ಗಳ ಪಿಟಿಓಗೆ ಜೋಡಿಸಿ ಸುಲಭವಾಗಿ ಉಪಯೋಗಿಸಬಹುದು. ಮುಂಗಾರು, ಹಿಂಗಾರು ಬೆಳೆಗಳನ್ನು ಕಡಿಮೆ ಸಮಯದಲ್ಲಿ ಒಕ್ಕಣೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಇದರಿಂದಾಗಿ ರೈತರ ಖರ್ಚು ಉಳಿಯುತ್ತದೆ ಹಾಗೂ ಸಮಯ ಉಳಿತಾಯವಾಗುತ್ತದೆ. ಈಗ ಈ ಯಂತ್ರೋಪಕರಣದ ಬೇಡಿಕೆಯೂ ಹೆಚ್ಚಾಗುತ್ತಿದೆ.
ಒಕ್ಕಣೆಯಂತ್ರ ಸಬ್ಸಿಡಿಯಲ್ಲಿ ಪಡೆಯಲು ಯಾವ ಯಾವ ದಾಖಲೆ ಬೇಕು?
ಒಕ್ಕಣೆ ಯಂತ್ರವನ್ನು ಸಬ್ಸಿಡಿಯಲ್ಲಿ ಪಡೆಯಬೇಕಾದರೆ ರೈತರು ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಎರಡು ಫೊಟೊ ಇರಬೇಕು. ಜಮೀನಿನ ಪಹಣಿ ಹೊಂದಿರಬೇಕು. ಬ್ಯಾಂಕ್ ಪಾಸ್ಬುಕ್ ಸಹ ಹೊಂದಿರಬೇಕು. ಒಕ್ಕಣೆ ಯಂತ್ರವನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಎಲ್ಲಿ ಸಲ್ಲಿಸಬೇಕು?
ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಂದ ರೈತರಿಗೆ ಸಬ್ಸಿಡಿಯಲ್ಲಿ ಒಕ್ಕಣೆಯಂತ್ರ ವಿತರಿಸಲು ಸರ್ಕಾರ ಸೂಚಿಸಲಾಗಿದೆ. ರೈತರು ಹತ್ತಿರದ ರೈತ ಸಂಪರ್ಕಕೇಂದ್ರಕ್ಕೆ ಭೇಟಿ ನೀಡಿ ಅಗತ್ಯದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಒಕ್ಕಣೆ ಯಂತ್ರದ ಬೆಲೆ
ಒಕ್ಕಣೆಯಂತ್ರದ ಬೆಲೆ ಸುಮಾರು ಐದುವರೆ ಲಕ್ಷ ರೂಪಾಯಿಯವರೆಗೆ ಇರುತ್ತದೆ. ಇದಕ್ಕೆ ರೈತರಿಗೆ ನೇರವಾಗಿ 1 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ಸಿಗುತ್ತದೆ. 4.5 ರಿಂದ 5.5 ಲಕ್ಷ ರೂಪಾಯಿಯವರೆಗೆ ಒಕ್ಕಣೆ ಮಾಡುವ ಯಂತ್ರದ ಬೆಲೆ ಇರುತ್ತದೆ. ಒಕ್ಕಣೆ ಯಂತ್ರವನ್ನು ಜೋಡಿಸಲು ರೈತರ ಬಳಿ ಟ್ರ್ಯಾಕ್ಟರ್ ಇರಬೇಕು.
ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಲಭ್ಯತೆಯ ಆಧಾರದ ಮೇಲೆ ರೈತರಿಗೆ ಒಕ್ಕಣೆ ಮಾಡುವ ಯಂತ್ರಗಳನ್ನು ಸಬ್ಸಿಡಿಯಲ್ಲಿ ನೀಡಲಾಗುವುದು.