ಕೊರೋನಾ ಆತಂಕದ ನಡುವೆಯೇ ನಡೆಯದ ಪಂಚರಾಜ್ಯಗಳ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ರಾಜ್ಯ ಪಶ್ಚಿಮ ಬಂಗಾಳ. ದೀದಿ ಎಂದೇ ಹೆಸರಾದ ಮಮತಾ ಬ್ಯಾನರ್ಜಿ(mamata banerjee) ಯವರು ಪ್ರಧಾನಿ ನರೇಂದ್ರ ಮೋದಿಯವರನ್ನೇ ನೇರವಾಗಿ ಟಕ್ಕರ್ ತೆಗೆದುಕೊಂಡು ಗಮನ ಸೆಳೆದಿದ್ದಾರೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮಬಂಗಾಳ ಫಲಿತಾಂಶ ಏನಾಗುತ್ತೋ ಎಂಬ ಕೂತೂಹಲ ಹೆಚ್ಚಿಸಿದೆ. ಬಿಜೆಪಿ ಹಾಗೂ ಟಿಎಂಸಿ ನಡುವಿನ ಪೈಪೋಟಿಯಲ್ಲಿ ಗೆಲುವು ಯಾರ ಪಾಲಾಗುತ್ತದೆ ಎಂಬುದೇ ಸದ್ಯಕ್ಕೆ ಕುತೂಹಲ.  ಚುನಾವಣಾ ಪ್ರಚಾರದಲ್ಲಿ ಮಮತಾ ಬ್ಯಾನರ್ಜಿ ಮಾತನಾಡುತ್ತಾ, ನಾನು ಒಂದು ಕಾಲಿನಲ್ಲಿ ಬಂಗಾಳವನ್ನು ಗೆಲ್ಲುತ್ತೇನೆ. ಭವಿಷ್ಯದಲ್ಲಿ ದೆಹಲಿಯಲ್ಲಿ ಎಱಡು ಕಾಲುಗಳ ಮೇಲೆ ಗೆಲವು ಪಡೆಯುತ್ತೇನೆ ಎಂದು ಸವಾಲು ಹಾಕಿದ್ದರು. ಈ ಮೂಲಕ ದಿ ಮುಂದಿನ ಲೋಕಸಭಾ ಚುನಾವಣೆ ದೆಹಲಿ ಗದ್ದುಗೆ ಬಗ್ಗೆ ಪ್ರಸ್ತಾಪಿಸಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಕ್ಕರ್ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಸಿದ್ದನ್ನು ನೇರವಾಗಿ ವಿರೋಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಸವಾಲು ಹಾಕಿದ ಈ ದೀದಿ ರಾಜಕೀಯಕ್ಕೆ ಬಂದದ್ದು, ಅವರು ಜೀವನ ಚರಿತ್ರಿಯೆ ಬಗ್ಗೆ ಅಲ್ಪ ಮಾಹಿತಿ ಇಲ್ಲಿದೆ.

ಜನವರಿ 5 ರಂದು 1955 ರಲ್ಲಿ ಜನಿಸಿದರು. ಪ್ರೊಮಿಲೇಶ್ವರ ಬ್ಯಾನರ್ಜಿ ಹಾಗೂ ಶ್ರೀಮತಿ. ಗಾಯತ್ರಿ ಬ್ಯಾನರ್ಜಿಯವರ ಇವರ ತಂದೆತಾಯಿ. ಒಂದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಇವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್ ಸೇರುವುದರ ಮೂಲಕ ಪ್ರಾರಂಭಿಸಿದರು

ತಮ್ಮ ರಾಜಕೀಯ ಜೀವನದುದ್ದಕ್ಕೂ ಅತಿ ಸರಳವಾದ ಜೀವನ ಶೈಲಿಯನ್ನು ಅನುಸರಿಸಿದರು. ಅವರು ಎಂದೂ ತಮ್ಮ ಬಟ್ಟೆ, ಸೌಂದರ್ಯವರ್ಧಕಗಳು ಅಥವಾ ಒಡವೆಗಳಿಗಾಗಿ ಹಣ ಖರ್ಚು ಮಾಡಲ್ಲ, ಯಾವಾಗಲೂ ತಮ್ಮ ಹೆಗಲಿಗೆ ಒಂದು ಖಾದಿ ಚೀಲವನ್ನು ಹಾಕಿಕೊಂಡು ಸರಳವಾಗಿರುತ್ತಾರೆ. ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು “ದೀದಿ” ಅಂದರೆ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಪಶ್ಚಿಮ ಬಂಗಾಳದ ಜಾದವ್ ಪುರ್ ಲೋಕ ಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹಳೆಯ ಕಮ್ಯುನಿಸ್ಟ್ ರಾಜಕೀಯ ಮುತ್ಸದಿಯಾದ ಸೋಮನಾಥ ಚಟರ್ಜಿಯವರನ್ನು ಸೋಲಿಸುವುದರ ಮೂಲಕ ಭಾರತದ ಅತ್ಯಂತ ಕಿರಿಯ ಸಂಸದರಾದರು.

ಮಮತಾ ಬ್ಯಾನರ್ಜಿ 2011 ರಿಂದ ಪಶ್ಚಿಮ ಬಂಗಾಳದ 8 ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯನ್ನು ನಿರ್ವಹಿಸಿದ ಮೊದಲ ಮಹಿಳೆಯಾಗಿದ್ದಾರೆ. ವಿಶೇಷ ಆರ್ಥಿಕ ವಲಯಗಳನ್ನು ವಿರೋಧಿಸುವುದರ ಮೂಲಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆಗಳ ಸ್ಥಾಪನೆಗೋಸ್ಕರ ಕೃಷಿಕರು ಹಾಗೂ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ಹೋರಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು.

2006ರಲ್ಲಿ ಬ್ಯಾನರ್ಜಿಯವರು ತಾವು ಸರ್ಕಾರದ ಒಂದು ಭಾಗವಾಗಿದ್ದರೂ ಸಹ ಪೆಟ್ರೋಲಿಯಂ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಲೋಕಸಭೆಯ ಎದುರು ಧರಣಿ ನಡೆಸಿದ್ದರು. ಅದೇ ಸಮಯದಲ್ಲಿ ಅವರು ಸಂಸದರಾದ ಅಮರ್ ಸಿಂಗ್‌ರವರ ಕೊರಳ ಪಟ್ಟಿಯನ್ನು ಹಿಡಿದು ಸಂಸತ್ತಿನ ಎದುರಲ್ಲೇ ಅವರನ್ನು ಎಳೆದು ಚರ್ಚೆಯಲ್ಲಿದ್ದರು. 1997 ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ಅನ್ನು ಮಂಡಿಸುವ ಸಮಯದಲ್ಲಿ, ರೈಲ್ವೆ ಮಂತ್ರಿಯಾದ ರಾಮ್ ವಿಲಾಸ್ ಪಾಸ್ವಾನ್‌ರವರು ಪಶ್ಚಿಮಬಂಗಾಳವನ್ನು ಕಡೆಗಣಿಸಿದರೆಂಬ ಕಾರಣಕ್ಕಾಗಿ ಮಮತಾ ಬ್ಯಾನರ್ಜಿಯವರು ತಮ್ಮ ಮೇಲು ಹೊದಿಕೆಯನ್ನು ಅವರ ಮೇಲೆ ಎಸೆದು, ತಾವು ರಾಜಿನಾಮೆ ನೀಡುವುದಾಗಿ ಘೋಷಿಸಿದರು. ಆದರೆ ಸಭಾಪತಿಯಾದ ಪಿ.ಎ ಸಾಂಗ್ಮಾರವರು ಅವರ ರಾಜಿನಾಮೆಯನ್ನು ನಿರಾಕರಿಸಿದ್ದಲ್ಲದೆ ಕ್ಷಮೆ ಕೇಳುವಂತೆ ಕೋರಿದರು. ನಂತರ ಸಂತೋಷ ಮೋಹನ್ ದೇಬ್‌ರವರ ಮಧ್ಯಸ್ಥಿಕೆಯಲ್ಲಿ ಪುನಃ ವಾಪಾಸಾದರು.

1997 ರಲ್ಲಿ ಕಾಂಗ್ರೆಸ್ ಬಿಟ್ಟು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ವನ್ನು ಕಟ್ಟಿ ಎರಡು ಬಾರಿ ಕೇಂದ್ರದಲ್ಲಿ ರೈಲ್ವೆ ಖಾತೆ ಸಚಿವರಾದರು. ಎನ್ಡಿಎ ಹಾಗೂ ಯುಪಿಎ ಎರಡೂ ಮೈತ್ರಿಕೂಟಗಳ ಸರಕಾರಗಳಲ್ಲಿ ಸಚಿವೆಯಾಗಿದ್ದ ಇವರು ನಂದಿಗ್ರಾಮ ಹಾಗೂ ಸಿಂಗೂರ ಹೋರಾಟಗಳಿಂದ ದೇಶಾದ್ಯಂತ ಹೆಸರುವಾಸಿಯಾದರು. 2011 ರಲ್ಲಿ ಪ್ರಥಮ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು. ನಂತರ 2016 ರಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟಕ್ಕೇರಿದರು.

Leave a Reply

Your email address will not be published. Required fields are marked *