ರೈತರಿಗೆ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆಗೆ ತರಬೇತಿ ನೀಡಲು ಅರ್ಜಿ ಆಹ್ವಾನ

ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ.  ರೈತರಿಗೆ ವೈಜ್ಞಾನಿಕವಾಗಿ ಕುರಿ ಸಾಕಾಣಿಕೆ ಮಾಡಲು  ಎರಡು ದಿನಗಳ ಕಾಲ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹೌದು, ಕಲಬುರಗಿ ಸೇಡಂ ರಸ್ತೆಯಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ಎರಡು ದಿನಗಳ ಕಾಲ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಜೂನ್ 29 ಹಾಗೂ 30 […]

ತೋಟಗಾರಿಕೆ ಇಲಾಖೆಯ ವತಿಯಿಂದ ಹನಿ ನೀರಾವರಿ ಅಳವಡಿಸಲು ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯ ವತಿಯಿಂದ 2022-23ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಹನಿ ನೀರಾವರಿ ಅಳವಡಿಸಲು ಶೇ. 90 ರವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹೌದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋಟಗಾರಿಕೆ ಇಲಾಖೆಯ ವತಿಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.  ಕೋಕೋ ಪ್ರದೇಶ ವಿಸ್ತರಣೆ, ಕಾಳು ಮೆಣಸು ಪ್ರದೇಶ ವಿಸ್ತರಣೆ (ತೆಂಗು ಮತ್ತು ಅಡಿಕೆ ಬೆಳೆಯೊಂದಿಗೆ) ಹಾಗೂ ಗೇರು ಪ್ರದೇಶ ವಿಸ್ತರಣೆ ಮತ್ತು  ಹನಿ […]

ರೈತರು ತಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲೇ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರೈತರು ತಮ್ಮ ಜಮೀನಿನ ಮ್ಯಾಪ್ ನ್ನು ಮೊಬೈಲ್ ನಲ್ಲೇ ಪಡೆಯಬಹುದು. ರೈತರ ಬಳಿ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು, ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಹೌದು, ಕಂದಾಯ ಇಲಾಖೆಯು ಈಗ ರೈತರಿಗೆ ತಮ್ಮ ಜಮೀನಿನ ಸರ್ವೆ ನಂಬರ್ ಸುತ್ತಮುತ್ತ ಯಾವ ಯಾವ ಸರ್ವೆ ನಂಬರಗಳಿವೆ, ಹಾಗೂ ಜಮೀನಿನ ಹತ್ತಿರ ಕೆರೆಕಟ್ಟೆ, ಗುಡ್ಡಗಳು, ಜಮೀನಿನ ಸುತ್ತಮುತ್ತ ಬಂಡಿದಾರಿ, ಕಾಲುದಾರಿ,  ಕಾಲುವೆ, ನಿಮ್ಮೂರಿನ ಅಕ್ಕಪಕ್ಕದ ಊರಿಗೆ ಹೋಗುವ ದಾರಿಗಳ […]

ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡಿ ಸರ್ಕಾರದ ಸೌಲಭ್ಯ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ನನ್ನ ಬೆಳೆ ನನ್ನ ಹಕ್ಕು ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಜ್ಯ ಸರ್ಕಾರ 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದೆ. ರೈತರಿಂದಲೇ ತಮ್ಮ ತೋಟ, ಹೊಲಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿ ಕೃಷಿ ಇಲಾಖೆ ಚಾಲನೆ ಕೊಟ್ಟಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಎಲ್ಲಾ ಬೆಳೆಗಳ ವಿವರಗಳನ್ನು ತಾವೇ ಸ್ವತಃ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಹೇಗೆ […]

ಹಸಿರುಮನೆ ನಿರ್ಮಾಣಕ್ಕೆ 2.40 ಲಕ್ಷ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ (ಆರ್.ಕೆ.ವಿ.ವೈ) ಹಸಿರು ಮನೆ ನಿರ್ಮಾಣಕ್ಕೆ 2.40 ಲಕ್ಷ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹೌದು,2022-23ನೇ ಸಾಲಿಗೆ ತೋಟಗಾರಿಕೆ ಇಲಾಖೆಯಿಂದ ಹಸಿರುಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಚಾಮರಾಜನಗರ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸುರಂಗ ಮಾದರಿ ಹಸಿರುಮನೆ ನಿರ್ಮಿಸಲು ರೈತರಿಗೆ ಶೇ. 50 ರಂತೆ ಪ್ರತಿ ಚದರ ಮೀಟರ್ ಗೆ 300 ರೂಪಾಯಿ ಸಹಾಯಧನ […]

ಬೆಳೆ ವಿಮೆ ಮಾಡಿಸಿದ ಈ ರೈತರಿಗೆ ಜಮೆಯಾಯಿತು ಮುಂಗಾರು ಬೆಳೆ ವಿಮೆ ಹಣ- ಇಲ್ಲಿದೆ ಮಾಹಿತಿ

2021-22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಿದೆ. ಹೌದು, ಬೆಳೆ ವಿಮೆಗಾಗಿ ಕಾಯುತ್ತಿರುವ ರೈತರಿಗೆ ಇದೊಂದು ಸಂತಸದ ಸುದ್ದಿಯಾಗಿದೆ. ರೈತರು ಮಂಗಾರು ಹಂಗಾಮಿನ ಬೆಳೆಗಳಿಗೆ ಎಕರೆಗೆ ಎಷ್ಟು ಹಣ ಜಮೆಯಾಗಿದೆ ಎಂಬ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಇದರೊಂದಿಗೆ ಯಾವ ಜಿಲ್ಲೆಗೆ  ಎಷ್ಟು  ರೈತರಿಗೆ ವಿಮೆ ಹಣ ಜಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ. 2021-22ನೇ ಸಾಲಿನಲ್ಲಿ ಬೆಳೆ ವಿಮೆ […]

ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ವಿಮೆ ಹಣ ಜಮೆಯಾಗಲು ರೈತರೇನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕುರಿತಂತೆ ಇನ್ನೂ ಬಹುತೇಕ ರೈತರಿಗೆ ಸರಿಯಾಗಿ ಮಾಹಿತಿ ಗೊತ್ತಿರಲಿಕ್ಕಿಲ್ಲ. ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ಬೆಳೆ ವಿಮೆ ಹಣ ಜಮೆಯಾಗುವುದಿಲ್ಲ. ಬೆಳೆ ವಿಮೆ ಎಂದರೇನು? ಬೆಳೆ ವಿಮೆ ಏಕೆ ಮಾಡಿಸಬೇಕು? ಬೆಳೆ ವಿಮೆ ಮಾಡಿದ ರೈತರಿಗೆ ಯಾವ ಸಂದರ್ಭದಲ್ಲಿ ಬೆಳೆ ವಿಮೆ ಹಣ ಜಮೆಯಾಗುತ್ತದೆ? ಬೆಳೆ ನಷ್ಟವಾದರೆ ರೈತರೇನು ಮಾಡಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಏನಿದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ? […]

ಐದು ದಿನ ಮುಂಚೆ ಮಳೆ ಮಾಹಿತಿ ಬೇಕೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರೈತರು, ಸಾಮಾನ್ಯ ಜನರು ಈಗ ಮನೆಯಲ್ಲಿಯೇ ಕುಳಿತು ಐದು ದಿನಗಳ ಮೊದಲೇ ಮಳೆಯ ಮಾಹಿತಿ ಪಡೆಯಬಹುದು. ಹೌದು, ಮೇಘದೂತ್ ಆ್ಯಪ್ ಸಹಾಯದಿಂದ ರೈತರು ಐದು ದಿನ ಮುಂಚೆ ಮಳೆ ಮಾಹಿತಿ ಪಡೆಯಬಹುದು. ರೈತರಿಗೆ ಸರಿಯಾದ ಸಮಯಕ್ಕೆ ಮಳೆಯ ಮಾಹಿತಿ ಸಿಗದೆ ಬೆಳೆ ಬಿತ್ತನೆಯಾಗಲಿ, ಕಟಾವು ಆಗಲಿ ಇನ್ನಿತರ ಕೃಷಿ ಚಟುವಟಿಕೆಗೆ ಸಮಸ್ಯೆಯಾಗುತ್ತಿರುತ್ತದೆ. ಕೆಲವು ಸಲ ಮಳೆಯ ಮುನ್ಸೂಚನೆ ಗೊತ್ತಾಗದೆ ಹಾನಿಯೂ ಅನುಭವಿಸುತ್ತಿರುತ್ತಾರೆ. ರೈತರಿಗೆ  ಹಾನಿಯಾಗಬಾರದು ಹಾಗೂ ಕೃಷಿ ಚಟುವಟಿಕೆಗೆ ತೊಂದರೆಯಾಗಬಾರದೆಂದು  […]

ತೋಟಗಾರಿಕೆ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿಶೇ. 90 ರವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

ರಾಷ್ಟ್ರೀಯ ತೋಟಗಾರಿಕೆ  ಮಿಷನ್ ಯೋಜನೆಯಡಿ ಸೇರಿದಂತೆ ಇನ್ನಿತರ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಶೇ. 50 ರಿಂದ  ಶೇ.90 ರವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹೌದು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಬಾಳೆ ಕಂದು, ಬಾಳೆ ಅಂಗಾಂಶ, ದ್ರಾಕ್ಷಿ, ಡ್ರ್ಯಾಗನ್ ಹಣ್ಣು, ಸಂಕರಣ ತರಕಾರಿ ಬೆಳೆಗಳ ವಿಸ್ತರಣೆ, ನೀರು ಸಂಗ್ರಹಣಾ ಘಟಕ, ಟ್ರ್ಯಾಕ್ಟರ್, ಪ್ಯಾಕ್ ಹೌಸ್, ಸಂಸ್ಕರಣಾ ಘಟಕ ಹಾಗೂ ಈರುಳ್ಳಿ ಶೇಖರಣಾ ಘಟಕಗಳಿಗೆ ಸಹಾಯಧನ ನೀಡಲು ಅರ್ಜಿ […]

ಈ ತರಕಾರಿ ಬೆಳೆಗಳಿಗೆ ಇಷ್ಟು ವಿಮೆ ಹಣ ಜಮೆ- ಇಲ್ಲಿದೆ ಮಾಹಿತಿ

2022-23ನೇ ಸಾಲಿನ ಮುಂಗಾರು ಹಂಗಾಮಿಗೆ ತೋಟಗಾರಿಕೆ ಬೆಳೆಗಳಿಗಷ್ಟೇ ಅಲ್ಲ, ತರಕಾರಿ ಬೆಳೆಗಳಿಗೂ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.  ಬಹುತೇಕ ರೈತರು ತೊಗರಿ, ಹೆಸರು, ಉದ್ದು, ಜೋಳ, ಸೂರ್ಯಕಾಂತಿ ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸುತ್ತಾರೆ. ಆದರೆ ತರಕಾರಿ ಬೆಳೆಗಳಿಗೆ ವಿಮೆ ಮಾಡಿಸುವುದಿಲ್ಲ. ಈಗ ಕೆಲವು ತರಕಾರಿ ಬೆಳೆಗಳಿಗೂ ವಿಮೆ ಮಾಡಿಸಬಹುದು. ವಿಮೆ ಮಾಡಿಸಿದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. […]