ಈ ವರ್ಷದ ಮೊದಲ ಚಂದ್ರಗ್ರಹಣವು (Lunar Eclipse) ಇದೇ ತಿಂಗಳ (ಮೇ 26 ರಂದು ) ವೈಶಾಖ ಪೂರ್ಣಿಮೆಯ ದಿನದಂದು ಭಾರತದ ಈಶಾನ್ಯ ಭಾಗದಲ್ಲಿ, ಪಶ್ಚಿಮ ಬಂಗಾಳದ ಕೆಲವು ಕಡೆ, ಒಡಿಸ್ಸಾದ ಕರಾವಳಿ ಪ್ರಾಂತಗಳಲ್ಲಿ ಹಾಗೂ ಅಂಡಮಾನ್ ನಿಕೋಬಾರ್ ನ ಕೆಲವು ದ್ವೀಪಗಳಲ್ಲಿ ಗೋಚರಿಸಲಿದೆ. ಆದರೆ ಈ ಚಂದ್ರಗ್ರಹಣ ಕೆಲವು ನಿಮಿಷಗಳವರೆಗೆ ಮಾತ್ರ ಕಾಣಿಸುತ್ತದೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಗ್ರಹಣ ಗೋಚರಿಸುತ್ತದೆ.ಒಡಿಸ್ಸಾದ ಪುರಿ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಸಾಯಂಕಾಲ 6.21ರಿಂದ ಕೇವಲ 2 ನಿಮಿಷಗಳ ಕಾಲ ಗೋಚರಿಸಲಿದೆ.

ಯಾವ ಸಮಯದಲ್ಲಿ ಚಂದ್ರಗ್ರಹಣವಾಗುತ್ತದೆ (What time is the lunar eclipse 2021?)

ಚಂದ್ರಗ್ರಹಣ ಪೂರ್ತಿ ವಿದ್ಯಾಮಾನ ಮೇ 26 ರಂದು ಮಧ್ಯಾಹ್ನ 3.15 ರಿಂದ ಸಾಯಂಕಾಲ 6.33 ರವರೆಗೆ ನಡೆಯುತ್ತದೆ. ಸಂಪೂರ್ಣ ಗ್ರಹಣವು ಸಂಜೆ 4.39 ಕ್ಕೆ ಪ್ರಾರಂಭವಾಗಿ ಸಂಜೆ 4.58ಕ್ಕೆ ಕೊನೆಗೊಳ್ಳಲಿದೆ.

ಸಂಜೆ 5.38 ರಿಂದ ಪೋರ್ಟ್ ಬ್ಲೇರ್‌ನಿಂದ 45 ನಿಮಿಷಗಳ ಕಾಲ ಗ್ರಹಣ ವೀಕ್ಷಿಸಬಹುದು. ಸಂಜೆ 6.21 ರಿಂದ ಪುರಿ ಮತ್ತು ಮಾಲ್ಡಾದಿಂದ ನೋಡಬಹುದು. ಆದರೆ, ಎರಡು ನಿಮಿಷ ಮಾತ್ರ ಕಾಣಸಿಗುತ್ತದೆ.

ಮುಂದಿನ ಚಂದ್ರ ಗ್ರಹಣವು ನವೆಂಬರ್ 19 ರಂದು ಸಂಭವಿಸಲಿದ್ದು, ಭಾರತದಲ್ಲಿ ಗೋಚರಿಸುತ್ತದೆ. ಇದು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಗಡಿಯಲ್ಲಿ ಚಂದ್ರೋದಯದ ನಂತರ ಭಾಗಶಃ ಹಂತದ ಅಂತ್ಯವು ಅಲ್ಪಾವಧಿಗೆ ಗೋಚರಿಸುತ್ತದೆ.

ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಒಂದೇ ರೇಖೆಯಲ್ಲಿ ಬಂದಾಗ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಚಂದ್ರನ ವ್ಯಾಸದ ಸುಮಾರು 70% ಭೂಮಿಯ ಮುಳುಗಿದಾಗ ಮಾತ್ರ ಬರಿಗಣ್ಣಿಗೆ ಗೋಚರಿಸುತ್ತದೆ.

ಸಂಪೂರ್ಣ ಚಂದ್ರಗ್ರಹಣ ಎಲ್ಲಿ ಗೋಚಿಸುತ್ತದೆ?

ಹುಣ್ಣಿಮೆ ದಿನದಂದು ಸಂಭವಿಸುವ ಈ ಸಂಪೂರ್ಣ ಗ್ರಹಣವನ್ನು ಆಸ್ಟ್ರೇಲಿಯನ್ನರು, ಪಶ್ಚಿಮ ಯುಎಸ್, ಪಶ್ಚಿಮ ದಕ್ಷಿಣ ಅಮೆರಿಕಾ ಅಥವಾ ಆಗ್ನೇಯ ಏಷ್ಯಾದಲ್ಲಿ ನೋಡಬಹುದು ಮತ್ತು ಈ ಒಟ್ಟು ಚಂದ್ರಗ್ರಹಣದ ಸಮಯದಲ್ಲಿ ಸುಮಾರು 14 ನಿಮಿಷಗಳ ಕಾಲ ಕೆಂಪುಛಾಯೆ ಕಾಣಸಿಗುತ್ತದೆ.

2021 ರಲ್ಲಿ ಎಷ್ಟು ಗ್ರಹಣಗಳು ಸಂಭವಿಸುತ್ತವೆ (How many eclipses are there in 2021?)

2021ರಲ್ಲಿ ನಾಲ್ಕು ಗ್ರಹಣಗಳು ಗೋಚರಿಸಲಿವೆ. ಈ ವರ್ಷ ಎರಡು ಸೂರ್ಯಗ್ರಹಣ, ಎರಡು ಚಂದ್ರಗ್ರಹಣ ಗೋಚರಿಸಲಿದೆ. ಮೇ-26- ಚಂದ್ರಗ್ರಹಣ, ಜೂನ್ 10- ಸೂರ್ಯಗ್ರಹಣ,  ನವೆಂಬರ್ 19-ಭಾಗಶಃ ಚಂದ್ರ ಗ್ರಹಣ, ಡಿಸೆಂಬರ್ 4-ಸೂರ್ಯ ಗ್ರಹಣ ಸಂಭವಿಸುತ್ತದೆ.

Leave a Reply

Your email address will not be published. Required fields are marked *