ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಡೆಗೆ ಜಾರಿಯಾದಂತಹ ರಾತ್ರಿ ಕರ್ಫ್, ವಾರಾಂತ್ಯ ಕರ್ಪ್ಯೂ, ಜತನಾ ಕರ್ಫ್ಯೂಗೆ ಜನರಿಂದ ನಿರೀಕ್ಷಿತ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ 14 ದಿನಗಳ ಲಾಕ್ಡೌನ್(lockdown) ಹೇರಲಾಗಿದೆ. ಈ ಬಾರಿ ಕ್ಟಟುನಿಟ್ಟಾಗಿ ನಿರ್ಬಂಧ ಜಾರಿ ಮಾಡಲಾಗಿದೆ.

ಇಂದಿನಿಂದ 14 ದಿನ ದಯವಿಟ್ಟು ಮನೆಬಿಟ್ಟು ಹೊರಗೆ ಬರಬೇಡಿ.  ಮನೆವಾಸವೇ ಒಳ್ಳೆಯದು. ಅನಗತ್ಯವಾಗಿ ಹೊರಗೆ ಬಂದರೆ ಪೊಲೀಸರ ಲಾಠಿ ಏಟು ರುಚಿಯೊಂದಿಗೆ ನಿಮ್ಮ ಗಾಡಿಯನ್ನು ಜಪ್ತಿ ಮಾಡುವುದು ಖಚಿತ. 14 ದಿನಗಳ ನಂತರವೇ ನಿಮ್ಮ ಗಾಡಿ ನಿಮ್ಮ ಕೈಸೇರುತ್ತದೆ. ನಿರ್ಭಂಧಗಳನ್ನು ಗಾಳಿಗೆ ತೂರಿದರೆ ಕಂಬಿಯೂ ಎಣಿಸಬೇಕಾಗುತ್ತದೆ.

ರಾಜ್ಯದಲ್ಲಿ ನಿಯಂತ್ರಣ ಮೀರಿ ಅಬ್ಬರಿಸುತ್ತಿರುವ ಕೊರೊನಾಕ್ಕೆ ಕಡಿವಾಣ ಹಾಕುವ, ಸೋಂಕಿನ ಸರಪಳಿಯನ್ನು ಕತ್ತರಿಸುವ ಉದ್ದೇಶದಿಂದ ಜಾರಿಗೊಳಿಸಿರುವ 14 ದಿನಗಳ ಕಠಿಣ ಕರ್ಫ್ಯೂ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದೆ.

ಖರೀದಿಗೆ ವಾಹನ ಬಳಸುವಂತಿಲ್ಲ

ಅಗತ್ಯ ವಸ್ತುಗಳನ್ನು ತರಲು ನಡೆದುಕೊಂಡೇ ಹೋಗಬೇಕು, ವಾಹನ ಬಳಸಬಾರದು. ಇನ್ನೂ 14 ದಿನ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲವೇ ಇಲ್ಲ. ಬೆಳಗ್ಗೆ 6 ರಿಂದ 10 ಗಂಟೆಯವರೆಗೂ ಅವಶ್ಯಕ ವಸ್ತು ಖರೀದಿಸಲು ಕೂಡ ವಾಹನ ಬಳಸುವಂತಿಲ್ಲ.

ಮನೆಯಿಂದ ಹೊರಗೆ ವಾಕ್‌ ಮಾಡುವುದು, ಬೀದಿಯಲ್ಲಿ ಆಟವಾಡುವುದು ಬೇಡ.  ಯಾವ ಕಾರಣಕ್ಕೂ ಮುಚ್ಚಿದ ಅಂಗಡಿ ಮುಂಗಟ್ಟುಗಳ ಮುಂದೆಯೂ ಕುಳಿತುಕೊಳ್ಳಬೇಡಿ.  ಸಣ್ಣ ಪುಟ್ಟ ಕಾರಣ ನೀಡಿ ಬೈಕ್‌, ಕಾರು ಹಿಡಿದುಕೊಂಡು ಓಡಾಡಬೇಡಿ. ಮನೆಯ ಸಮೀಪದ ಕಾಲ್ನಡಿಗೆ ದೂರದ ಅಂಗಡಿಗಳಿಂದಲೇ ಖರೀದಿಸಿ
ತರಕಾರಿ, ಹಣ್ಣು, ಹಾಲು, ಮಾಂಸ, ದಿನಸಿ, ಔಷಧಿ, ಅಗತ್ಯ ವಸ್ತು ತರಲು ನಡೆದುಕೊಂಡು ಹೋಗಿ ಬರತಕ್ಕದ್ದು.  ಅನಗತ್ಯವಾಗಿ ತಿರುಗುವ ವಾಹನ ಜಪ್ತಿ ಮಾಡಿ ಕೇಸ್‌ ದಾಖಲಿಸಲಾಗುವುದು. ಜನರು ಗುಂಪು ಸೇರಬಾರದು. ಸೂಚನೆ ಉಲ್ಲಂಘಿಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.  ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ಮಾತ್ರ ನಡೆದುಕೊಂಡು ಹೋಗಿ ಅಗತ್ಯ ವಸ್ತು ಕೊಳ್ಳಬೇಕು.

ಬೆಳಗ್ಗೆ 10 ರ ನಂತರದ ಅವಧಿಯಲ್ಲಿ ಕಚೇರಿ, ಕೈಗಾರಿಕೆ, ಗುರುತಿಸಲಾದ ಚಟುವಟಿಕೆ ಹಾಗೂ ತುರ್ತು ಆರೋಗ್ಯ ಸೇವೆಗೆ ಸಂಚಾರ ಹೊರತುಪಡಿಸಿ ಅನಗತ್ಯವಾಗಿ ರಸ್ತೆಗಿಳಿದರೆ ಬಿಗಿ ಕ್ರಮಕ್ಕೆ ರಾಜ್ಯಾದ್ಯಂತ ಪೊಲೀಸ್ ಪಡೆ ಸಜ್ಜಾಗಿದೆ.

Leave a Reply

Your email address will not be published. Required fields are marked *