ವಿದ್ಯುತ್ ಚಾಲಿತ ಸ್ಕೂಟರ್ ಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನೀಡಲು ಸರ್ಕಾರ ಮತ್ತೊಂದು ಸಂತಸದ ಸುದ್ದಿ ನೀಡಿದೆ. ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಉತ್ತೇಜಿಸುವ 2ನೇ ಹಂತದ ಯೋಜನೆಯಲ್ಲಿ (ಫೇಮ್-2 ದ್ವಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು (Electric scooter subsidy hiked) ಶೇಕಡಾ 50 ರಷ್ಟು ಹೆಚ್ಚಿಸಿದೆ. ಸರ್ಕಾರದ ಈ ನಿರ್ಧಾರವನ್ನು ಕಂಪನಿಗಳು ಸ್ವಾಗತಿಸಿವೆ.
ಕೇಂದ್ರ ಸರ್ಕಾರವು ಫೇಮ್-2 ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಈ ಮೊದಲು ವಿದ್ಯುತ್ ಚಾಲಿತ ವಾಹನಗಳಿಗೆ ಪ್ರತಿ ಕೆಡಬ್ಲ್ಯೂಎಚ್ಓಗೆ (per KWh) 10 ಸಾವಿರ ಸಬ್ಸಿಡಿ ನಿಗದಿಪಡಿಸಲಾಗಿತ್ತು. ಇದೀಗ ದ್ವಿಚಕ್ರವಾಹನಗಳಿಗೆ ಪ್ರತಿ ಕೆಡಬ್ಲ್ಯೂಎಚ್ ಗೆ (per KWh) 15 ಸಾವಿರ ಸಬ್ಸಿಡಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಇದರ ಲಾಭ ಗ್ರಾಹಕರಿಗೆ ವರ್ಗಾವಣೆಯಾಗಬೇಕು.
ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮಾರಾಟ ಬೆಳವಣಿಗೆ ಕಂಡಿದೆ. ಸಬ್ಸಿಡಿಯನ್ನು ಶೇ. 50 ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಮಾರಾಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 2025ರವರೆಗೆ 60 ಲಕ್ಷಕ್ಕೂ ಹೆಚ್ಚಿನ ವಾಹನಗಳಉ ಮಾರಾಟವಾಗುವ ಗುರಿಯಿದೆ ಎಂದು ಏಥರ್ ಎನರ್ಜಿ ಕಂಪನಿಯ ಸಹ ಸ್ಥಾಪಕ ತರುಣ್ ಮೆಹ್ತಾ ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಬಳಸುವ ವಿದ್ಯುತ್ ಚಾಲಿತ ಸ್ಕೂಟರ್ ಬೆಲೆಯು 60 ಸಾವಿರಕ್ಕಿಂತ ಕಡಿಮೆಯಾಗಲಿದ್ದು, ಹೈಸ್ಪೀಡ್ ಸ್ಕೂಟರ್ ಗಳ ಬೆಲೆಯು ಗರಿಷ್ಟ 1 ಲಕ್ಷದವರೆಗೆ ಇರಲಿದೆ ಎಂದು ತಿಳಿಸಿದ್ದಾರೆ.
ವಾಹನಗಳಲ್ಲಿ ಅಳವಡಿಸಲಾಗಿರುವ ಬ್ಯಾಟರಿಯ ಶಕ್ತಿಗೆ ಅನುಗುಣವಾಗಿ ಈ ಪ್ರೋತ್ಸಾಹಧನ ನೀಡಲಾಗುತ್ತದೆ. ವಾಹನಗಳಲ್ಲಿರುವ ಲಿಥಿಯಂ ಐಯಾನ್ ಬ್ಯಾಟರಿಯ ಪ್ರತಿ ಕಿಲೋ ವ್ಯಾಟ್ ಪರ್ ಹವರ್ ಶಕ್ತಿಗೆ 20 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ.