ದೇಶದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನೋ ಸೋಂಕಿಗೆ ನೀಡುವ ಲಸಿಕೆಗಳ ದರವನ್ನು ಜಿಎಸ್ ಟಿ ಸೇರಿದಂತೆ ಕೇಂದ್ರ ಸರ್ಕಾರ ಇಂದು ನಿಗಧಿ ಮಾಡಿದೆ.

ಕೋವಿಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳು ಗರಿಷ್ಠ 150 ರೂಪಾಯಿ ಸೇವಾ ಶುಲ್ಕ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಸೋಮವಾರ ಸಾಯಂಕಾಲ ಪ್ರಧಾನಿ ನರೇಂದ್ರ ಮೋದಿಯವರು  ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು. ಜೊತೆಗೆ ಲಸಿಕೆ ನೀಡಿಕೆಗೆ ಖಾಸಗಿ ಆಸ್ಪತ್ರೆಗಳು ಪಡೆಯುವ ಶುಲ್ಕವನ್ನು ಪರಿಷ್ಕರಿಸಿ ಘೋಷಣೆ ಮಾಡಿದ್ದರು.

ಕೇಂದ್ರ ಸರ್ಕಾರ ನಿಗದಿ ಮಾಡಿದ ಅದಕ್ಕಿಂತ ಹೆಚ್ಚಿಗೆ ತೆಗೆದುಕೊಳ್ಳದಂತೆ ಖಾಸಗೀ ಆಸ್ಪತ್ರೆಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ 150 ರೂಪಾಯಿ ಸೇವಾ ಶುಲ್ಕ, ಜಿಎಸ್ ಟಿ ಸೇರಿದಂತೆ ಒಟ್ಟಾರೆಯಾಗಿ  ಪ್ರತಿ ಡೋಸ್ ಗೆ ದರ ನಿಗದಿ (private hospital can charge a maximum of 780 for covishield, 1410 covaxin) ಮಾಡಲಾಗಿದೆ

ಲಸಿಕೆ, – ದರ, -ಜಿಎಸ್ಟಿ, -ಸೇವಾ ಶುಲ್ಕ – ‌ ಒಟ್ಟು ದರ

ಕೋವಿಶೀಲ್ಡ್- 600 ರೂ, 30 , 150 , 780 ರೂಪಾಯಿ

ಕೋವಾಕ್ಸಿನ್- 1200ರೂ, 60, 150, 1410 ರೂಪಾಯಿ

ಸ್ಪುಟ್ನಿಕ್ – ವಿ ಮ 948ರೂ, 47, 150, 1145 ರೂಪಾಯಿ

ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರದ ಹಿನ್ನೆಲೆಯಲ್ಲಿ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ತಮಗೆ ಬೇಕಾದಂತೆ ಬೇಕಾಗುತ್ತಿದ್ದರು ನಿಗದಿ ಮಾಡುವಂತಿಲ್ಲ. ಕೇಂದ್ರ ಸರ್ಕಾರ ನಿಗಧಿ ಮಾಡಿರುವ ದರದಲ್ಲಿ ಲಸಿಕೆಯನ್ನು ನೀಡಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ

ಪ್ರತಿದಿನ ದರ ಪರಿಶೀಲನೆ:

ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ 25ರಷ್ಟು ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಲಸಿಕೆ ಗಳಿಗೆ ದರ ನಿಗದಿ ಮಾಡಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಅಧಾರದಲ್ಲಿ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ನೀಡುತ್ತಿದ್ದವು ಅಥವಾ ಇಲ್ಲವೋ ಎನ್ನುವುದನ್ನು ಪ್ರತಿದಿನ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *